sewing machine
ನಮ್ಮ ಕರ್ನಾಟಕ ಸರ್ಕಾರವು ಮಹಿಳೆರಿಗಾಗಿ ಸ್ವಂತ ಉದ್ಯೋಗ ಮಾಡಲು ಉಚಿತ ಒಲೆಗೆ ಯಂತ್ರ ಯೋಜನೆಯನ್ನು ಜಾರಿಗೆ ತಂದಿದೆ. ಬಡ ಮತ್ತು ಸ್ವಾವಲಂಬಿ ಮಹಿಳೆಯರಿಗೆ ಈ ಯೋಜನೆ ತುಂಬಾ ಉಪಯುಕ್ತವಾಗುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಏನೆಂದರೆ, ಮಹಿಳೆಯರು ಬೇರೆಯವರ ಮೇಲೆ ಅವಲಂಬಿತರಾಗದೆ, ಮನೆಯಲ್ಲೇ ಕುಳಿತು ಸ್ವಂತವಾಗಿ ಟೈಲರಿಂಗ್ ಕೆಲಸ ಮಾಡಿ ಹಣ ಸಂಪಾದಿಸಬೇಕು. ಮನೆಯಲ್ಲಿ ಟೈಲರಿಂಗ್ ಕೆಲಸ ಮಾಡಲು ಆಸಕ್ತಿ ಇರುವ ಮಹಿಳೆಯರು ಯೋಜನೆ ಸಂಪೂರ್ಣ ಪ್ರಯೋಜನ ಪಡೆಯಬಹುದು.
ಯೋಜನೆಯ ಮುಖ್ಯ ಪ್ರಯೋಜನಗಳು
ಈ ಯೋಜನೆ ಅಡಿಯಲ್ಲಿ ಅರ್ಹತೆ ಇರುವ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ಅಥವಾ ಅದನ್ನು ಕೊಂಡುಕೊಳ್ಳಲು ಸರಕಾರದಿಂದ ಆರ್ಥಿಕ ನೆರವು ಸಿಗುತ್ತದೆ. ಈ ಯಂತ್ರ ಬಳಸಿ ಮಹಿಳೆಯರು ಮನೆಯಲ್ಲೇ ಬ್ಲೌಸ್, ಬಟ್ಟೆಗಳು ಮತ್ತು ಶಾಲೆಗೆ ಪ್ರತಿ ತಿಂಗಳು ಆದಾಯ ಗಳಿಸಬಹುದು. ವಿಧವೆಯರು, ಅನಾಥರು ಮತ್ತು ಅಂಗವಿಕಲ ಮಹಿಳೆಯರಿಗೆ ಈ ಯೋಜನೆಯಲ್ಲಿ ಮೊದಲ ಆದ್ಯತೆ ಸಿಗುತ್ತದೆ. ಮನೆಯಲ್ಲೇ ಸಣ್ಣ ಬ್ಯೂಟಿ ಅಥವಾ ಟೈಲರಿಂಗ್ ಶಾಪ್ ಪರರಮಿಸಲು ಈ ಯೋಜನೆ ತುಂಬಾ ಸಹಾಯ ಮಾಡುತ್ತದೆ ಬಡ ಕುಟುಂಬದ ಮಹಿಳೆಯರು ಯಾವುದೇ ಬಂಡವಾಳವಿಲ್ಲದೆ ಸ್ವಂತ ಉದ್ಯೋಗ ಪ್ರಾರಂಭಿಸಲು ಇದೊಂದು ಉತ್ತಮ ಅವಕಾಶ.
ಅರ್ಹತೆಗಳು -ಯಾರಿಗೆ ಈ ಯೋಜನೆ ಸಿಗುತ್ತದೆ
- ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಮುಖ್ಯ ಅರ್ಹತೆಗಳು ಇರಬೇಕು:
- ಅರ್ಜಿದಾರರು ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿ ಆಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ ಸರ್ಕಾರದ ನಿಯಮದಂತೆ ಕಡಿಮೆ ಇರಬೇಕು.
- ಅರ್ಜಿದಾರರಿಗೆ ಕನಿಷ್ಠ ಹೊಲಿಗೆ ಯಂತ್ರ ಬಳಸುವ ಪ್ರಾರ್ಥಮಿಕ ಜ್ಞಾನ ಅಥವಾ ಅನುಭವ ಇರಬೇಕು.
- ವಿಧವೆಯರು, ವಿಕಲಾಂಗರು ಮತ್ತು ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ
ಬೇಕಾಗುವ ಮುಖ್ಯ ದಾಖಲೆಗಳು
ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮುಖ್ಯ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಅರ್ಜಿದಾರರ ಆಧಾರ್ ಕಾರ್ಡ್
- ನಿವಾಸಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್ ಅಥವಾ ವೋಟರ್ ಐಡಿ
- ಬ್ಯಾಂಕ್ ಪಾಸ್ ಬುಕ್ ಕಾಫಿ ( ಸರಿಯಾದ ಖಾತೆ ವಿವರ )
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಸೈಜ್ ಫೋಟೋಗಳು
- ವಿಧವೆ ಅಥವಾ ವಿಕಲಾಂಗ ಪ್ರಮಾಣ ಪತ್ರ (ಅನ್ವಯಿಸಿದರೆ ಮಾತ್ರ )
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ.
ಮೊದಲಿಗೆ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ (ಸೇವಾ ಸಿಂಧು) ಪೋರ್ಟಲ್ ಗೆ ಭೇಟಿ ನೀಡಿ. Apply now
ಅಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆ 2026 ಲಿಂಕಿಂಗ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಫಾರ್ಮ್ನಲ್ಲಿ ನಿಮ್ಮ ಹೆಸರು ವಿಳಾಸ ಮತ್ತು ಬ್ಯಾಂಕ್ ವಿವರಗಳು ಸರಿಯಾಗಿ ಭರ್ತಿ ಮಾಡಿ.
ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ ಫಾರ್ಮ್ ಅನ್ನು ಮರುಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಸಬ್ಮಿಟ್ ಮಾಡಿದ ನಂತರ ಅರ್ಜಿ ಸಂಖ್ಯೆ ಅಥವಾ ರಶೀದಿಯನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ.
ಮುಖ್ಯ ಸೂಚನೆ
ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ಮಾಹಿತಿ ನೀಡಬೇಡಿ.
ಯಾರದೇ ಮಧ್ಯವರ್ತಿಗಳಿಗೆ ಹಣ ನೀಡಬೇಡಿ. ಇದು ಸರ್ಕಾರದ ಉಚಿತ ಯೋಜನೆಯಾಗಿದ್ದು ಅಧಿಕೃತ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ.
ಯಾರು ಅರ್ಜಿ ಸಲ್ಲಿಸಲು ಅನರ್ಹರು
ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ಕೆಳಗಿನ ಅರ್ಹತೆಗಳದಿದ್ದರೆ ಅರ್ಜಿ ತಿರಸ್ಕರಿಸ ಗೊಳಿಸಬಹುದು :
ಅರ್ಜಿದಾರರ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ಉದ್ಯೋಗದಲ್ಲಿದ್ದಾರೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
ಕುಟುಂಬದ ವಾರ್ಷಿಕ ಆದಾಯವು ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿದ್ದರೆ ಅರ್ಜಿ ಸಲ್ಲಿಸಲು ಬರುವುದಿಲ್ಲ.
ಈಗಾಗಲೇ ಸರ್ಕಾರದ ಯಾವುದೇ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದಿದ್ದಾರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
ಕರ್ನಾಟಕದ ಹೊರಗಿನ ರಾಜ್ಯದ ಮಹಿಳೆಯರಿಗೆ ಈ ಯೋಜನೆಯಲ್ಲಿ ಅವಕಾಶ ಇರುವುದಿಲ್ಲ.
ಹೊಲಿಗೆ ಯಂತ್ರ ಸಿಕ್ಕ ನಂತರ ಸಿಗುವ ಉದ್ಯೋಗಾವಕಾಶಗಳು
ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಪಡೆದ ನಂತರ ಮಹಿಳೆಯರಿಗೆ ತಮ್ಮ ಮನೆಯಲ್ಲಿ ಸಣ್ಣ ಪ್ರಮಾಣದ ಉದ್ಯೋಗ ಪ್ರಾರಂಭಿಸಬಹುದು :
ಬ್ಲೌಸ್ ಮತ್ತು ಡ್ರೆಸ್ ಟೈಲರಿಂಗ್ ಹತ್ತಿರದ ಮನೆಯವರು ಕೊಡುವುದರ ಮೂಲಕ ದಿನನಿತ್ಯದ ಆದಾಯ ಗಳಿಸಬಹುದು.
ಶಾಲೆ ಬಟ್ಟೆ ಸ್ಥಳೀಯ ಶಾಲೆಗಳ ಬಟ್ಟೆ ಹೊಲಿಯುವ ಆರ್ಡರ್ ಪಡೆದು ಉತ್ತಮ ಲಾಭ ಗಳಿಸಬಹುದು.
ಸಣ್ಣ ಬ್ಯೂಟಿಕ್ ಹೊಸ ವಿನ್ಯಾಸದ ಉಡುಪುಗಳನ್ನು ತಿದ್ದುಪಡಿಸಿ ಮಾರಾಟ ಮಾಡಬಹುದು.
ಆನ್ಲೈನ್ ಟೈಲರಿಂಗ್ ಸೇವೆಗಳು ವಾಟ್ಸಾಪ್ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಆರ್ಡರ್ ಪಡೆದು ಮನೆಯಲ್ಲಿ ಹೊಲಿಗೆ ಕೆಲಸ ಮಾಡಬಹುದು.

ಅರ್ಜಿ ಸಲ್ಲಿಸುವಾಗ ಮಾಡಬಾರದ ತಪ್ಪುಗಳು
ನಿಮ್ಮ ಅರ್ಜಿ ಸುಲಭವಾಗಿ ಅನುಮೋದನೆ ಪಡೆಯಲು ಈ ಕೆಳಗಿನ ತಪ್ಪುಗಳನ್ನು ಮಾಡಬೇಡಿ:
ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ನಿಮ್ಮ ಹೆಸರು ಒಂದೇ ರೀತಿಯಾಗಿರಬೇಕು.
ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಅಪ್ಲೋಡ್ ಮಾಡುವ ದಾಖಲೆಗಳು ಸ್ಪಷ್ಟವಾಗಿ ಕಾಣಿಸುವಂತಿರಬೇಕು.
ಅರ್ಜಿಯಲ್ಲಿ ನೀಡಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು ಏಕೆಂದರೆ ಅಫಿಶಿಯಲ್ ಮೆಸೇಜ್ ಗಳು ಅದಕ್ಕೆ ಬರುತ್ತವೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1.ಈ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಶುಲ್ಕವಿದೆಯೇ?
ಇಲ್ಲ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಆನ್ಲೈನ್ ಶುಲ್ಕವಿರುವುದಿಲ್ಲ. ಇದು ಸಂಪೂರ್ಣವಾಗಿ ಉಚಿತ.
2. ಹೊಲಿಗೆ ತರಬೇತಿ ಇಲ್ಲದವರು ಅರ್ಜಿ ಸಲ್ಲಿಸಬಹುದೇ?
ಹೊಲಿಗೆ ಕೆಲಸದ ಕನಿಷ್ಠ ಜ್ಞಾನ ಅಥವಾ ತರಬೇತಿ ಇದ್ದರೆ ಅರ್ಜಿ ಬೇಗನೆ ಅನುಮೋದನೆಗೊಳ್ಳುತ್ತದೆ.
3. ಆಫ್ಲೈನ್ನಲ್ಲಿ ಎಲ್ಲಿ ಅರ್ಜಿ ಸಲ್ಲಿಸಬೇಕು?
ನಿಮ್ಮ ಹತ್ತಿರದ ಗ್ರಾಮ ಪಂಚಾಯತಿ ತಾಲೂಕು ಪಂಚಾಯತಿ ಅಥವಾ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಸಂಪರ್ಕ ವಿವರಗಳು ಮತ್ತು ಹೆಲ್ಪ್ ಲೈನ್
ಈ ಯೋಜನೆಗೆ ಸಂಬಂಧಿಸಿದಂತೆ ನಿಮಗೇನಾದರೂ ಸಂಶಯ ಕಲಿಯಿದ್ದರೆ ಅಥವಾ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ನೀವು ನೇರವಾಗಿ ಸರ್ಕಾರದ ಅಧಿಕೃತ ಹೆಲ್ಪ್ ಲೈನ್ ಸಂಖ್ಯೆಗೆ ಕರೆ ಮಾಡಬಹುದು.
ಅಧಿಕೃತ ವೆಬ್ಸೈಟ್
sevasindhuservices.karnataka.gov.in
ಉಚಿತ ಕರೆ ಸಂಖ್ಯೆ ಟೋಲ್ ಫ್ರೀ ನಂಬರ್ 1902
ಸಂಪರ್ಕಿಸಬೇಕಾದ ಕಚೇರಿ ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಹತ್ತಿರದ ಗ್ರಾಮವನ್ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯುವುದು ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಲು ಸೇವಾ ಸಿಂಧು ಪೋರ್ಟಲ್ ನಲ್ಲಿ ನೀಡಲಾದ ಅರ್ಜಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಮುಕ್ತಾಯ
ಕರ್ನಾಟಕ ಸರ್ಕಾರದ ಉಚಿತ ಹೊಲಿಗೆ ಯಂತ್ರ ಯೋಜನೆಯು ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಜೀವನ ಮಟ್ಟವನ್ನು ಉತ್ತಮಪಡಿಸಲು ತಂದಿರುವ ಅತ್ಯುತ್ತಮ ಯೋಜನೆಯಾಗಿದೆ.ಸ್ವಂತ ಕಾಲಿನ ಮೇಲೆ ನಿಂತು ಆದಾಯ ಗಳಿಸಲು ಬಯಸುವ ಪ್ರತಿಯೊಬ್ಬ ಅರ್ಹ ಮಹಿಳೆಯು ಯೋಜನೆಗೆ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಅಧಿಕೃತ ಪೋರ್ಟಲ್ ಮೂಲಕವೇ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಪ್ರಯೋಜನ ಪಡೆಯಿರಿ