Bharat jodo Yuva Sangha
ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಾರಿಗೆ ತಂದಿರುವ ಭರತ್ ಜೋಡು ಯುವ ಸಂಘದ ಸದಸ್ಯತ್ವ ನೊಂದಣಿ ಮತ್ತು ಕಾರ್ಡು ಪಡೆಯಲು ಅನುಸರಿಸಬೇಕಾದ ಮಾರ್ಗಸೂಚಿಗಳು :
ವಯಸ್ಸು 16 ರಿಂದ 35 ವರ್ಷದೊಳಗಿನ ಯುವಕ/ ಯುವತಿಯರು. ಸ್ಥಳೀಯ ನಿವಾಸಿ :ನೀವು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯಿತಿ ಅಥವಾ ನಗರ ವಾರ್ಡನ ಕಾಯಂ ನಿವಾಸಿ ಆಗಿರಬೇಕು. ಒಬ್ಬ ವ್ಯಕ್ತಿ ಒಂದೇ ಸಂಘದಲ್ಲಿ ಸದಸ್ಯತ್ವ ಪಡೆಯಲು ಅರ್ಹರಿರುತ್ತಾರೆ.
ನೋಂದಣಿ ಹಾಗೂ ಕಾರ್ಡು ಪಡೆಯುವ ಹಂತಗಳು : ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಿ: ನಿಮ್ಮ ವ್ಯಾಪ್ತಿಯ ಯುವ ಸಬಲೀಕರಣ ಮತ್ತು ಕಿರೀಡ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರ ಕಚೇರಿ ಅಥವಾ ಗ್ರಾಮ ಪಂಚಾಯತಿ /ವಾರ್ಡ್ ಕಚೇರಿಯನ್ನು ಸಂಪರ್ಕಿಸಿ ನೋಂದಣಿ ಅರ್ಜಿಯನ್ನು ಪಡೆದುಕೊಳ್ಳಿ.
ಸಂಘದ ರಚನೆ (100 ಸದಸ್ಯರ ಗುಂಪು ):
ಪ್ರತಿಯೊಂದು ಭಾರತ್ ಜೋಡ ಯುವ ಸಂಘ ರಚನೆಯಾಗಲು ನಿಮ್ಮ ಗ್ರಾಮ ಪಂಚಾಯಿತಿ ಅಥವಾ ವಾರ್ಡ್ ವ್ಯಾಪ್ತಿಯ ಕನಿಷ್ಠ 100 ಯುವಜನರ ಸದಸ್ಯತ್ವ ಅಗತ್ಯವಿರುತ್ತದೆ.
BJYS MEMBER CARD: Apply link 🔗
ಅಗತ್ಯ ದಾಖಲೆಗಳು :
- ಆಧಾರ್ ಕಾರ್ಡ್ ( Aadhar card)
- ವಯಸ್ಸಿನ ಪುರಾವೆ (Sslc ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರ )
- ನಿವಾಸಿ ದೃಢೀಕರಣ ಪತ್ರ/ ಪಡಿತರ ಚೀಟಿ
- ಪಾಸ್ಪೋರ್ಟ್ ಸೈಜ್ ಫೋಟೋ
ಅರ್ಜಿ ಸಲ್ಲಿಕೆ ಮತ್ತು ಸದಸ್ಯತ್ವ ಕಾರ್ಡ್
ಭರ್ತಿ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು ನಿಮ್ಮ ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದ ನಂತರ ಪರಿಶೀಲನೆ ನಡೆದು ಸಂಘದ ಸದಸ್ಯತ್ವ ನೋಂದಣಿ ಪೂರ್ಣಗೊಂಡು ಅಧಿಕೃತ ಸದಸ್ಯತ್ವ ಐಡಿ ಕಾರ್ಡ್ ನೀಡಲಾಗುತ್ತದೆ.
ಭಾರತ ಜೋಡೋ ಯುವಕರ ಸಂಘ ಪದಾಧಿಕಾರಿಗಳ ಪೋಸ್ಟ್ ಗಳು ಶ್ರೇಷ್ಠ ಮತ್ತು ಹುದ್ದೆಗಳ ಪಟ್ಟಿ ಇಲ್ಲಿದೆ.
ಅಧ್ಯಕ್ಷ :(prasident )ಸಂಘದ ಎಲ್ಲಾ ನಿರ್ಧಾರಗಳು ಮತ್ತು ಕಾರ್ಯಕ್ರಮಗಳ ಮುಖ್ಯಸ್ಥರಾಗಿರುತ್ತಾರೆ.
ಉಪಾಧ್ಯಕ್ಷರು (vice-prasident) ಅಧ್ಯಕ್ಷರ ಗೈರು ಹಾಜರಿಯಲ್ಲಿ ಸಂಘದ ಜವಾಬ್ದಾರಿಯನ್ನು ವಹಿಸಿಕೊಳ್ಳುವವರು.
ಪ್ರಧಾನ ಕಾರ್ಯದರ್ಶಿ( General Secretary) ಸಂಘದ ದಿನನಿತ್ಯದ ಚಟುವಟಿಕೆಗಳು ಸಭೆಗಳು ಮತ್ತು ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸುವ ಪ್ರಮುಖ ಪೋಸ್ಟ್.
ಕಾರ್ಯದರ್ಶಿ/ ಸಹ ಕಾರ್ಯದರ್ಶಿ (secretary/joint secretary ) ಪ್ರಧಾನ ಕಾರ್ಯದರ್ಶಿಗೆ ಕೆಲಸಗಳಲ್ಲಿ ನೇರವಾಗುವವರು.
ಖಜಾಂಚಿ (Treasurer ) ಸಂಘದ ಹಣಕಾಸು ಲೆಕ್ಕಪತ್ರ (Finance) ಮತ್ತು ಆಯ ವ್ಯಯವನ್ನು ನಿರ್ವಹಿಸುವವರು.
ಸಂಘಟನಾ ಕಾರ್ಯದರ್ಶಿ (organizing secretary) ಕಾರ್ಯಕ್ರಮಗಳನ್ನು ಸಂಘಟಿಸುವುದು ಮತ್ತು ಯುವಕರನ್ನು ಒಗ್ಗೂಡಿಸುವ ಕೆಲಸ ಮಾಡುವವರು.
ಪ್ರಚಾರ ಕಾರ್ಯದರ್ಶಿ (media /publicity secretary) ಸಂಘದ ಮಾಹಿತಿ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ತಲುಪಿಸುವವರು.
ಕಾರ್ಯ ಕಾರಿ ಸಮಿತಿ ಸದಸ್ಯರು (Executive committee member )ಸಂಘದ ನಿರ್ಧಾರಗಳಲ್ಲಿ ಭಾಗವಹಿಸುವ ಪ್ರಮುಖ ಸಮಿತಿ ಸದಸ್ಯರು.